Tuesday, 22 January 2013

ನನ್ನ ಗೆಳೆಯನ ಗೃಹಪ್ರವೇಶಕ್ಕೆ ಶುಭಾಶಯಗಳು

 ಶುಭ ಮಂಗಳವಾಗಲಿ | ಈ ಮನೆಯಲ್ಲಿ ನಿತ್ಯ ಚೇತನ ತುಂಬಲಿ
ಭಕ್ತಿ ಜ್ನಾನದ ಬೆಳಕು ಮೂಡಲಿ | ವಿತ್ತ ಸಂಪದ ತುಂಬಿ ತುಳುಕಲಿ
ಸತ್ಯ ಧರ್ಮದ ಜ್ಯೂತಿ ಬೆಳೆಗಲಿ | ಚಿತ್ತ ಜಾಕ್ಶಿಯೆ ನಿನ್ನ ದಯೆಯಲಿ |ಪ|

ಗುರುವಿನ ದಯೆಇರಲಿ | ಈ ಮನೆಯಲ್ಲಿ ಗುರು ಹಿರಿಯರು ನೆಲೆಸಲಿ
ಸತತ ದೇವರ ಕಾರ್ಯ ನಡೆಯಲಿ |ಸಿರಿಯು ಹರುಶದಿ ಸ್ಥಿರದಿ ನೆಲೆಸಲಿ
ಕರುಣೆ ನಿನ್ನ ಪೂರ್ಣ ವಲಿಯಲಿ |ವಾಣಿ ವಲಿದು ವಾಸವಾಗಲಿ  

ಕಿಲ ಕಿಲ ನಗು ಇರಲಿ ಈ ಮನೆಯಲ್ಲಿ | ನಲಿವ ಸಂಭ್ರಮ ಇರಲಿ|
ಲಲನೆಯರ ಸಿರಿಮುಡಿಯ ಕುಸುಮದ ಗಂಧವೆಲ್ಲೆಡೆ ಚೆಲ್ಲಿ ಸೂಸಲಿ | 
ಚೆಲುವ ಮಕ್ಕಳಾಡಿ ನಲಿಯಲಿ ಕಲೆಯ ವಿದ್ಯೆಯ ನೆಲೆ ಇದಾಗಲಿ. ೨

ಧನಧಾನ್ಯ ಹೆಚ್ಚಾಗಲಿ | ಈ ಮನೆಯಲ್ಲಿ | ಮನಕೆ ಶಾಂತಿಯು ದೊರಕಲಿ|
ದೀನದಲಿತರಿಗನ್ನ ನೀಡಲಿ | ದಣಿದವರಿಗಾಸರೆಯುಆಗಲಿ | ಹ್ಯೆನದಾಹೊಳೆ
ತುಂಬಿ ಹರಿಯಲಿ | ಮನ್ಮುಮಥಾರಿಯೆ ನಿನ್ನ ದಯೆಯಲಿ ೩

ಘನತೆ ಗೌರವ ಹೆಚ್ಚಲಿ |  ಈ ಮನೆಯ ಸತ್ಕೀರ್ತಿ ಗಗನವ ಮುಟ್ಟಲಿ
ಅನುದಿನವು ಅಥಿತಿಯರು ನೆಲೆಸಲಿ | ಗಾನ ವೇದದ ಘೊಶ ಮೊಳಗಲಿ | 
ಬ್ರಾಹ್ಮಣರ ಭೋಜನ ನಿತ್ಯವಾಗಲಿ | ವನಜ ಲೋಚನೆ ನಿನ್ನ ದಯೆಯಲಿ |೪

                                       ಶ್ರೀ

Tuesday, 7 August 2012

ತಾರುಣ್ಯದ ಕನಸಿನಲಿ.....



ಮನದನ್ನೆ ಓ ಚಿನ್ನ ಬಾ ನನ್ನ ಬಳಿಗೆ
ನಗುವಿರುವ ನಲಿವಿರುವ ಈ ನನ್ನ ಮನೆಗೆ
ಸುಖ ದುಃಖ ಸಮಬಾಳು ಹಂಚಿಕೊಳ್ಳುವನಾವು
ಸಿಹಿ ಕಹಿ ತಿನ್ನುವ! ನವ ವರ್ಷದೊಳಗೆ

ನೀ ಚಂದ್ರಮುಖಿ ಸಿಂಹಕಟಿಯವಳು
ಗಾಂಬೀರ್ಯದಂತಿರುವ ಆನೆನಡೆಯವಳು
ಸುಂದರ ಲತೆಯಂತೆ ಹಬ್ಬಿಕೊಂಡಿರುವವಳು
ನಗುಮೊಗದಿ ಎಂದೆಂದೂ ಸಂತೈಸುವವಳು

ಅನುರಾಗ ಅನುಕಂಪ ಹೃದಯದಲ್ಲಿರಲಿ
ಎಲ್ಲರಲ್ಲೊ ಸಮಬಾವ ಪ್ರೀತಿಹೊಂದಿರಲಿ
ನನ್ನಮನ ನಿನ್ನಮನ ಎಂದೂ ಒಂದಾಗಿರಲಿ
ಬಾಳನೌಕೆಯ ಸಾಗಿಸುವ ದೃಷ್ಟಿಯೊಂದಿರಲಿ

ಆ ಮಾತು ಈ ಮಾತು ಎಂದೂಮರೆಯದಮಾತು
ಇದೇನನ್ನ ಮನದಾಳದ ಮುಸ್ಸಂಜೆಮಾತು
ಓ ನನ್ನ ಗೆಳತಿಯೇ ನಿನ್ನ ಪ್ರೀತಿಯಮಾತು
ಎಂದೆಂದೊ ಸವಿಯದಾ ಸವಿಜೇನಮಾತು


ಯಾರೇನು ಹೇಳಿದರೊ ನಾನಿನ್ನಬಿಡೆನು
ಗೆಳತಿಬಾರೇ ಎಂದು ನಿನ್ನಕರೆಯುವೆನು
ನೀ ಬಾರದಿದ್ದರೆ ಮನನೊಂದು ಹೇಳುವೆನು
ನನ್ನ ತಪ್ಪಿದ್ದರೆ ಕ್ಷಮಿಸು ಎನ್ನುವೆನು


ತಂದೆತಾಯಿಯರೆಂದು ನನ್ನನ್ನುಬಿಡರು
ಬಾರೋ ಕಂದಾ ಎಂದು ಅಪ್ಪಿಮುದ್ದಾಡುವರು
ನಾನೋಮ್ಮೆ ಹೊಗದಿರೆ ಬೇಸರಿಸುವವರು
ಕೊನೆಗೊಮ್ಮೆ ಸಿಹಿಮುತ್ತು ನನಗೆ ನೀಡುವರು.!!




.....ಶ್ರೀ.....


Saturday, 14 July 2012

ಒಲವಿನ ಇಂಚರ...

 

ಫೋನಲ್ಲಿ ಪಿಸುಗುಡುತ ನಿಂತಿದ್ದೆ ನಾನು
ಬಂತಾಗ ತಂಗಾಳಿ ಚುಂಬಿಸಲು ನನ್ನ
ಹೂ ಮಳೆಯು ಸುರಿದಿತ್ತು ನೆನಪಿಸಲು ನಿನ್ನ
ಆಗಲೆ ಆಗಿದ್ದೆ ಪ್ರಿಯತಮನು ಚಿನ್ನಾ

ಹಾಗೆ ನೀ ನೆನಪಾದೆ ಓ ನನ್ನ ಸಖೀ
ವಿರಹವನು ಸಹಿಸೆನು ಬಾ ಚಂದ್ರಮುಖಿ
ಬಿಟ್ಟಿರೆನು ನಿನ್ನನ್ನು ಕನಸಿನಾ ನರ್ತಕಿ
ಸಂಬ್ರಮದಿ ಹೇಳುವೆನು ನೀ ಪ್ರಾಣಸಖಿ

ಮರೆಯದಿರು ನೀನನ್ನ ಓ ನನ್ನ ಉಸಿರೆ
ನೀನಿಲ್ಲದೆ ಹುಟ್ಟಲ್ಲ  ಹ್ರುದಯದಯಲಿ ಹಸಿರೇ
ನೀರುಣಿಸಲು ಓಮ್ಮೆ ಬಾ ಓನನ್ನ ತರಳೆ
ನೀನ್ಯಾಕೆ ಕೇಳಲ್ಲ ನಿನಗೇನು ಮರುಳೇ...?

                                                 ...ಶ್ರೀ... 
       

Wednesday, 4 July 2012

ಅರಳುವೆಯಾ ಮಲ್ಲಿಗೆಯೆ.....

  ಅರಳುವೆಯಾ ಮಲ್ಲಿಗೆಯೆ
ಬೀರುವೆಯಾ ಪರಿಮಳವ

ಬರುವೆಯಾ  ಜೇನೆ
 ಹೀರಲು  ಮಾಧುರ್ಯವ

 ಕಾದಿಹುದು ದುಂಭಿಯು
 ಕದ್ದೊಯ್ಯಲು ಮಕರಂದವ

ಕೂಗುವೆಯಾ ಕೂಗಿಲೆಯೆ
ಹಾಡುವೆಯಾ ಗಾಯನವ

 ನರ್ತಿಸುವೆಯಾ ನವಿಲೆ
  ನೂಡುವೆ ನಾಟ್ಯವ

  ಕಾದಿಹೆನು ನಾನಿನ್ನು
      ಗೆಳತಿ ನಿನ್ನಾಗಮನವ........
                                                      ಶ್ರೀ...

Wednesday, 27 June 2012


ಮಿತ್ರರೇ,ಜೀವನ ಸೀಮಿತವಾಗಿದೆ!

          ಸುಮಾರು ಶೇ.೫೦ ರಶ್ಟು ಯುವಕರು ತಮ್ಮ ದಿನನಿತ್ಯದ  ಶೇ.೭೦ ರಶ್ಟೂ ಸಮಯವನ್ನು ತಮ್ಮಜೀವನಕ್ಕೆ ಎಳ್ಳಶ್ಟೂ ಉಪಯೊಗ ಇಲ್ಲದ ವಿಶಯಗಳಲ್ಲಿ ಹಾಳು ಮಾಡುತ್ತಿದ್ದಾರೆ. ಉದಾ.. ತಾಸುಗಟ್ಟಲೆ ಅಧ್ಯಯನ ಇಲ್ಲದ ವಿಶಯಗಳ ಬಗ್ಗೆ ಹರಟೆ ಹೊಡೆಯುವುದು(ಅದೂ ಮಿತಿಮೀರಿ), ದೂರಚಿತ್ರವಾಹಿನಿ ನೋಡುವುದು, ಬೀದಿಯಲ್ಲಿ ಇತರರಿಗೆ ತೊಂದರೆಯಾಗುವಂತೆ ಗಂಟೆಗಟ್ಟಲೆ ನಿಂತುಕೊಳ್ಳುವುದು.ಮುಖದರ್ಶನಕ್ಕಾಗಿ ಊರೆಲ್ಲ ಸುತ್ತಾಡುವುದು.ಹುಡುಗಿಯರ ಬಗ್ಗೆ ಚರ್ಚೆಮಾಡುತ್ತಾ ನಿಲ್ಲುವುದು.ಮಿತ್ರರೇ, ನಿಜವಾಗಿ ಇದರಲ್ಲೆನಾದರು ಅರ್ಥವಿದೆಯೇ? ಇದರಲ್ಲಿನ ಯಾವುದಾದರೂ ನಿಮ್ಮ ಜೀವನವಿಡೀ ಸಹಾಯ ಮಾಡುವುದೇ? ಹಣಕ್ಕಿಂತ ಯಾವ ಸಮಯಕ್ಕೆ ಹೆಚ್ಚಿನ ಮಹತ್ವವಿದೆಯೋ ಮತ್ತು ಯಾವ ವಯಸ್ಸು ನಿಮ್ಮ ಜೀವನ ನಿರ್ಮಾಣಕ್ಕಾಗಿ ಮಹತ್ವದ್ಧಾಗಿದೆಯೋ ಅಂತಹ ಯುವಾವಸ್ತೆಯ ಸಮಯವನ್ನು ನೀವೆಲ್ಲ ಕಾಗದದಂತೆ ಹಾರಿಸುತ್ತಿದ್ದೀರಿ. ನೆನಪಿಡಿ!!! ಕಳೆದುಹೋದ ಸಮಯವು  ಮತ್ತೆ ಹಿಂದಿರುಗಿ ಬರಲಾರದು ಮತ್ತು ಆನಂತರ  ಪಶ್ಚ್ತ್ತಾತ್ತಾಪ ಪಟ್ತರೆ ಅದರಲ್ಲೆನೂ ಅರ್ಥವಿಲ್ಲ. ಮಿತ್ರರೇ, ಕಳೆದುಹೋದ ಕ್ಶಣವು ಹಿಂತಿರುಗಿ ಸಿಗುವುದಿಲ್ಲ ಎಂಬುದನ್ನು ಅರಿತುಕೊಳ್ಳಿ ಮತ್ತು ಸಮಯವನ್ನು ವ್ಯರ್ಥವಾಗಿ ಕಳೆಯಬೇಡಿ!!.......  plz

Thursday, 14 June 2012


ನಿನ್ನ ಕನಸು

ನಿನ್ನ ಕನಸಿಂದ ಆಚೆ ಬರುವುದು ಹೇಗೆ
ನಿನ್ನ ಪ್ರೀತಿಗೆ ಹೀಗೆ ನನ್ನನೊಡ್ಡಿ

ನಿನ್ನ ಪ್ರೇಮವು ಎನಗೆ ಒಂದಗುಲದ ಜಾಗ
ಕನಸಿನಂತಃಪುರದ ತೋಟದೊಳಗೆ

ನಿನ್ನೊಲವಿನ ಸ್ಪರ್ಶ ನೆನಪಾಗಿ ಕಾಡಿದರೆ  
ಮ್ಯಯೊಳಗೆ ಮಿಂಚು ಹೊಳಪು

ನಿನ್ನ ಕನಸಿಂದ ಆಚೆ ಬಾರೆನು ನಾನು
ಕನವರಿಸಿ ನುಡಿಸುವೆ ಹೊಸ ರಾಗವನು

ನಿನ್ನ ನೆನಪಿಗೆ ಕಟ್ಟಲಾರೆ ಪಂಜರವ
ನಿನಗೊ ತಿಳಿದಿದೆ ನಮ್ಮಿಬ್ಬರ ಪ್ರೀತಿ

ತಡೆಯಲಾರಿರಿ ಇನ್ನೊ ನನ್ನ ಹೀಗೆ ಅಡ್ಡಗಟ್ಟಿ.
ಶ್ರೀ

Sunday, 10 June 2012

ಶ್ರೀ



shree
ಜೀವನದ ಪಯಣದಲಿ ನೂರೊಂದು ತಿರುವುಗಳು
ತಿರುವು ತಿರುವಿನಲ್ಲೂ ಹೊಸ ಕಲಿಕೆಯ ಒಲವು
ಹೊಸ ಸಂಭಂದಗಳ ಮೆರಗು
ಕೆಲವು ಅನಿರಿಕ್ಶಿಥ ಆದರು ರೂಮಾಂಚಕ
ಇದ್ದಶ್ಟೂ ದಿನ ಎನಾದರೂ ಸಾದಿಸುವ ಹಂಬಲ
ಕೊನೆಯ ಪಯಣದಲಿ ಎನನ್ನು ಸಾದಿಸದೆ ಹೊಗುವೆನೆಂಬ
ಕೊರಗು ಒಟ್ಟಾರೆ ಈ ಎರಡು ದಿನದ ಪಯಣದಲಿ
ಬರಿ ನೆನಪುಗಳೇ ಶಾಶ್ವಥ...