ಮಿತ್ರರೇ,ಜೀವನ ಸೀಮಿತವಾಗಿದೆ!
ಸುಮಾರು ಶೇ.೫೦ ರಶ್ಟು ಯುವಕರು ತಮ್ಮ ದಿನನಿತ್ಯದ ಶೇ.೭೦ ರಶ್ಟೂ ಸಮಯವನ್ನು ತಮ್ಮಜೀವನಕ್ಕೆ ಎಳ್ಳಶ್ಟೂ ಉಪಯೊಗ ಇಲ್ಲದ ವಿಶಯಗಳಲ್ಲಿ ಹಾಳು ಮಾಡುತ್ತಿದ್ದಾರೆ. ಉದಾ.. ತಾಸುಗಟ್ಟಲೆ ಅಧ್ಯಯನ ಇಲ್ಲದ ವಿಶಯಗಳ ಬಗ್ಗೆ ಹರಟೆ ಹೊಡೆಯುವುದು(ಅದೂ ಮಿತಿಮೀರಿ), ದೂರಚಿತ್ರವಾಹಿನಿ ನೋಡುವುದು, ಬೀದಿಯಲ್ಲಿ ಇತರರಿಗೆ ತೊಂದರೆಯಾಗುವಂತೆ ಗಂಟೆಗಟ್ಟಲೆ ನಿಂತುಕೊಳ್ಳುವುದು.ಮುಖದರ್ಶನಕ್ಕಾಗಿ ಊರೆಲ್ಲ ಸುತ್ತಾಡುವುದು.ಹುಡುಗಿಯರ ಬಗ್ಗೆ ಚರ್ಚೆಮಾಡುತ್ತಾ ನಿಲ್ಲುವುದು.ಮಿತ್ರರೇ, ನಿಜವಾಗಿ ಇದರಲ್ಲೆನಾದರು ಅರ್ಥವಿದೆಯೇ? ಇದರಲ್ಲಿನ ಯಾವುದಾದರೂ ನಿಮ್ಮ ಜೀವನವಿಡೀ ಸಹಾಯ ಮಾಡುವುದೇ? ಹಣಕ್ಕಿಂತ ಯಾವ ಸಮಯಕ್ಕೆ ಹೆಚ್ಚಿನ ಮಹತ್ವವಿದೆಯೋ ಮತ್ತು ಯಾವ ವಯಸ್ಸು ನಿಮ್ಮ ಜೀವನ ನಿರ್ಮಾಣಕ್ಕಾಗಿ ಮಹತ್ವದ್ಧಾಗಿದೆಯೋ ಅಂತಹ ಯುವಾವಸ್ತೆಯ ಸಮಯವನ್ನು ನೀವೆಲ್ಲ ಕಾಗದದಂತೆ ಹಾರಿಸುತ್ತಿದ್ದೀರಿ. ನೆನಪಿಡಿ!!! ಕಳೆದುಹೋದ ಸಮಯವು ಮತ್ತೆ ಹಿಂದಿರುಗಿ ಬರಲಾರದು ಮತ್ತು ಆನಂತರ ಪಶ್ಚ್ತ್ತಾತ್ತಾಪ ಪಟ್ತರೆ ಅದರಲ್ಲೆನೂ ಅರ್ಥವಿಲ್ಲ. ಮಿತ್ರರೇ, ಕಳೆದುಹೋದ ಕ್ಶಣವು ಹಿಂತಿರುಗಿ ಸಿಗುವುದಿಲ್ಲ ಎಂಬುದನ್ನು ಅರಿತುಕೊಳ್ಳಿ ಮತ್ತು ಸಮಯವನ್ನು ವ್ಯರ್ಥವಾಗಿ ಕಳೆಯಬೇಡಿ!!....... plz

