Thursday, 14 June 2012


ನಿನ್ನ ಕನಸು

ನಿನ್ನ ಕನಸಿಂದ ಆಚೆ ಬರುವುದು ಹೇಗೆ
ನಿನ್ನ ಪ್ರೀತಿಗೆ ಹೀಗೆ ನನ್ನನೊಡ್ಡಿ

ನಿನ್ನ ಪ್ರೇಮವು ಎನಗೆ ಒಂದಗುಲದ ಜಾಗ
ಕನಸಿನಂತಃಪುರದ ತೋಟದೊಳಗೆ

ನಿನ್ನೊಲವಿನ ಸ್ಪರ್ಶ ನೆನಪಾಗಿ ಕಾಡಿದರೆ  
ಮ್ಯಯೊಳಗೆ ಮಿಂಚು ಹೊಳಪು

ನಿನ್ನ ಕನಸಿಂದ ಆಚೆ ಬಾರೆನು ನಾನು
ಕನವರಿಸಿ ನುಡಿಸುವೆ ಹೊಸ ರಾಗವನು

ನಿನ್ನ ನೆನಪಿಗೆ ಕಟ್ಟಲಾರೆ ಪಂಜರವ
ನಿನಗೊ ತಿಳಿದಿದೆ ನಮ್ಮಿಬ್ಬರ ಪ್ರೀತಿ

ತಡೆಯಲಾರಿರಿ ಇನ್ನೊ ನನ್ನ ಹೀಗೆ ಅಡ್ಡಗಟ್ಟಿ.
ಶ್ರೀ

No comments:

Post a Comment