Tuesday, 22 January 2013

ನನ್ನ ಗೆಳೆಯನ ಗೃಹಪ್ರವೇಶಕ್ಕೆ ಶುಭಾಶಯಗಳು

 ಶುಭ ಮಂಗಳವಾಗಲಿ | ಈ ಮನೆಯಲ್ಲಿ ನಿತ್ಯ ಚೇತನ ತುಂಬಲಿ
ಭಕ್ತಿ ಜ್ನಾನದ ಬೆಳಕು ಮೂಡಲಿ | ವಿತ್ತ ಸಂಪದ ತುಂಬಿ ತುಳುಕಲಿ
ಸತ್ಯ ಧರ್ಮದ ಜ್ಯೂತಿ ಬೆಳೆಗಲಿ | ಚಿತ್ತ ಜಾಕ್ಶಿಯೆ ನಿನ್ನ ದಯೆಯಲಿ |ಪ|

ಗುರುವಿನ ದಯೆಇರಲಿ | ಈ ಮನೆಯಲ್ಲಿ ಗುರು ಹಿರಿಯರು ನೆಲೆಸಲಿ
ಸತತ ದೇವರ ಕಾರ್ಯ ನಡೆಯಲಿ |ಸಿರಿಯು ಹರುಶದಿ ಸ್ಥಿರದಿ ನೆಲೆಸಲಿ
ಕರುಣೆ ನಿನ್ನ ಪೂರ್ಣ ವಲಿಯಲಿ |ವಾಣಿ ವಲಿದು ವಾಸವಾಗಲಿ  

ಕಿಲ ಕಿಲ ನಗು ಇರಲಿ ಈ ಮನೆಯಲ್ಲಿ | ನಲಿವ ಸಂಭ್ರಮ ಇರಲಿ|
ಲಲನೆಯರ ಸಿರಿಮುಡಿಯ ಕುಸುಮದ ಗಂಧವೆಲ್ಲೆಡೆ ಚೆಲ್ಲಿ ಸೂಸಲಿ | 
ಚೆಲುವ ಮಕ್ಕಳಾಡಿ ನಲಿಯಲಿ ಕಲೆಯ ವಿದ್ಯೆಯ ನೆಲೆ ಇದಾಗಲಿ. ೨

ಧನಧಾನ್ಯ ಹೆಚ್ಚಾಗಲಿ | ಈ ಮನೆಯಲ್ಲಿ | ಮನಕೆ ಶಾಂತಿಯು ದೊರಕಲಿ|
ದೀನದಲಿತರಿಗನ್ನ ನೀಡಲಿ | ದಣಿದವರಿಗಾಸರೆಯುಆಗಲಿ | ಹ್ಯೆನದಾಹೊಳೆ
ತುಂಬಿ ಹರಿಯಲಿ | ಮನ್ಮುಮಥಾರಿಯೆ ನಿನ್ನ ದಯೆಯಲಿ ೩

ಘನತೆ ಗೌರವ ಹೆಚ್ಚಲಿ |  ಈ ಮನೆಯ ಸತ್ಕೀರ್ತಿ ಗಗನವ ಮುಟ್ಟಲಿ
ಅನುದಿನವು ಅಥಿತಿಯರು ನೆಲೆಸಲಿ | ಗಾನ ವೇದದ ಘೊಶ ಮೊಳಗಲಿ | 
ಬ್ರಾಹ್ಮಣರ ಭೋಜನ ನಿತ್ಯವಾಗಲಿ | ವನಜ ಲೋಚನೆ ನಿನ್ನ ದಯೆಯಲಿ |೪

                                       ಶ್ರೀ