Tuesday, 7 August 2012

ತಾರುಣ್ಯದ ಕನಸಿನಲಿ.....



ಮನದನ್ನೆ ಓ ಚಿನ್ನ ಬಾ ನನ್ನ ಬಳಿಗೆ
ನಗುವಿರುವ ನಲಿವಿರುವ ಈ ನನ್ನ ಮನೆಗೆ
ಸುಖ ದುಃಖ ಸಮಬಾಳು ಹಂಚಿಕೊಳ್ಳುವನಾವು
ಸಿಹಿ ಕಹಿ ತಿನ್ನುವ! ನವ ವರ್ಷದೊಳಗೆ

ನೀ ಚಂದ್ರಮುಖಿ ಸಿಂಹಕಟಿಯವಳು
ಗಾಂಬೀರ್ಯದಂತಿರುವ ಆನೆನಡೆಯವಳು
ಸುಂದರ ಲತೆಯಂತೆ ಹಬ್ಬಿಕೊಂಡಿರುವವಳು
ನಗುಮೊಗದಿ ಎಂದೆಂದೂ ಸಂತೈಸುವವಳು

ಅನುರಾಗ ಅನುಕಂಪ ಹೃದಯದಲ್ಲಿರಲಿ
ಎಲ್ಲರಲ್ಲೊ ಸಮಬಾವ ಪ್ರೀತಿಹೊಂದಿರಲಿ
ನನ್ನಮನ ನಿನ್ನಮನ ಎಂದೂ ಒಂದಾಗಿರಲಿ
ಬಾಳನೌಕೆಯ ಸಾಗಿಸುವ ದೃಷ್ಟಿಯೊಂದಿರಲಿ

ಆ ಮಾತು ಈ ಮಾತು ಎಂದೂಮರೆಯದಮಾತು
ಇದೇನನ್ನ ಮನದಾಳದ ಮುಸ್ಸಂಜೆಮಾತು
ಓ ನನ್ನ ಗೆಳತಿಯೇ ನಿನ್ನ ಪ್ರೀತಿಯಮಾತು
ಎಂದೆಂದೊ ಸವಿಯದಾ ಸವಿಜೇನಮಾತು


ಯಾರೇನು ಹೇಳಿದರೊ ನಾನಿನ್ನಬಿಡೆನು
ಗೆಳತಿಬಾರೇ ಎಂದು ನಿನ್ನಕರೆಯುವೆನು
ನೀ ಬಾರದಿದ್ದರೆ ಮನನೊಂದು ಹೇಳುವೆನು
ನನ್ನ ತಪ್ಪಿದ್ದರೆ ಕ್ಷಮಿಸು ಎನ್ನುವೆನು


ತಂದೆತಾಯಿಯರೆಂದು ನನ್ನನ್ನುಬಿಡರು
ಬಾರೋ ಕಂದಾ ಎಂದು ಅಪ್ಪಿಮುದ್ದಾಡುವರು
ನಾನೋಮ್ಮೆ ಹೊಗದಿರೆ ಬೇಸರಿಸುವವರು
ಕೊನೆಗೊಮ್ಮೆ ಸಿಹಿಮುತ್ತು ನನಗೆ ನೀಡುವರು.!!




.....ಶ್ರೀ.....


2 comments: